Bengaluru Daires 1
Bengaluru Daires 1
Bengaluru Daires is a collection of my beautiful memories, experiences and stories from the city of Bengaluru
ಜೂನ್ 26 ಕ್ಕೆ ಅಂದರೆ ನಾಳೆ , ನಾನು ಬೆಂಗಳೂರಿಗೆ ಬಂದು ಸರಿಯಾಗಿ ಆರು ತಿಂಗಳು ತುಂಬುತ್ತದೆ , ಮೊದಲನೇ ದಿನ ಕಾಲೇಜುಗೆ ಹೋದ ಪ್ರಸಂಗ ಇನ್ನು ನೆನಪಿದೆ,
ನಾನು Yeshwanthapuraದಲ್ಲಿ ಇದ್ದೆ, ನನ್ನ ಕಾಲೇಜು kengeriಯಲ್ಲಿ ಇತ್ತು.
ಮೊದಲನೇ ದಿನ ಕ್ಯಾಬ್ ನಲ್ಲಿ ಹೋಗೋಣವೆಂದು ಮತ್ತೆ ಎರಡನೇ ದಿನದಿಂದ ಮೆಟ್ರೋ ದಲ್ಲಿ ಹೋಗೋಣ ಎಂದು ಸ್ಕೆಚ್ ಹಾಕಿದೆ. ಮಾರನೇ ದಿನ ಬೆಳೆಗ್ಗೆ 7 ಕ್ಕೆ ಮನೆ ಬಿಟ್ಟು, ಮೆಟ್ರೋದಲ್ಲಿ ಮೆಜೆಸ್ಟಿಕ್ ಗೆ ಹೋದೆ, ಅಲ್ಲಿಂದ ಪರ್ಪಲ್ ಲೈನ್ ಚೇಂಜ್ ಮಾಡಿಕೊಂಡು ಮೈಸೂರು ರೋಡ್ ಸ್ಟೇಷನ್ ಗೆ ಹೋದೆ, ಅಲ್ಲಿಂದ ನಾನು ಒಂದು ಬಸ್ ಹತ್ತಬೇಕಾಗಿತ್ತು. ಬಸ್ ಗೆ ಕಾದೆ , ಸುಮಾರು ಒಂದು-ಮೂರೂ ನಿಮಿಷಗಳ ನಂತರ ಬಸ್ ಬಂತು, ಕಂಡಕ್ಟರ್ ಗೆ "R V ಕಾಲೇಜು ಗೆ ಹೋಗುತ್ತಾ " ಎಂದು ಕೇಳಿದೆ, "ಹೂ " ಅಂದ್ರು . ಸರಿ ಎಂದು ಬಸ್ ಹತ್ತಿದೆ ಆಕಡೆ ಈಕಡೆ ನೋಡುತ್ತಾ ಎಲ್ಲಿ ಹೋದೆ ಅಂದು ಗೊತ್ತಾಗಲೇ ಇಲ್ಲ, ಬಸ್ ನನ್ನನ್ನು R R ನಗರಕ್ಕೆ ಹೋಗಿ ಬಿಟ್ಟ ಮೇಲೇನೆ ಗೊತ್ತಾಗಿದ್ದು ನಾನು ಎಲ್ಲಿದ್ದೇನೆ ಅಂದು ?. ನಾನು ಆಯೋ ಎಂದು ಅಲ್ಲಿಂದ ಇನ್ನೊಂದು ಬಸ್ ಹತ್ತಿ ಮತ್ತೆ ಒಂದು ಆಟೋ ತಗೊಂಡು ಕಾಲೇಜು ಗೆ ಬಂದಾಗ 9:45 ಆಗಿತ್ತು.
ಬೆಂಗಳೂರು ಬಹಳ ವಿಶಾಲ ಊರು, ಇಲ್ಲಿ ಸ್ವಲ್ಪವೇ ಸ್ವಲ್ಪ ಪ್ರಜ್ಞೆ ಕಳೆದುಕೊಂಡ್ರು ಸಾಕು ಎಲ್ಲೊ ಹೋಗಬೇಕಾಗಿದ್ದು ಇನ್ನೆಲ್ಲಿಗೋ ಹೋಗಿಬಿಡುತ್ತವೆ. ಇನ್ನೊಂದು ಉದಾಹರಣೆ
ಆಂದು ಬೆಳೆಗ್ಗೆ ಸ್ವಲ್ಪ ಸಮಯ ಮೀರಿತ್ತು ಹಾಗಾಗಿ ನಾನು ಸಹಜವಾಗಿ ಆತುರದಲ್ಲಿ ಇದ್ದೆ , ಇದೆ ಆತುರದಲ್ಲಿ ಮೆಟ್ರೋದಲ್ಲಿ ಮೆಜೆಸ್ಟಿಕ್ ಗೆ ಹೋದೆ ಅಲ್ಲಿ ನಾನು ಮೈಸೂರು ರೋಡ್ ಗೆ ಹೋಗುವ ಮೆಟ್ರೋ ಹತ್ತು ಹೋಗಿ ಬೈಯಪ್ಪನಹಳ್ಳಿ ಮೆಟ್ರೋ ಹತ್ತಿಬಿಟ್ಟಿದೆ. ಕೊನೆಗೆ ಬೈಯಪ್ಪನಹಳ್ಳಿ ಗೆ ಹೋದಾಗಲೇ ನನಗೆ ಗೊತ್ತಾಗಿದ್ದು ಎಲ್ಲೊ ಬಂದಿದ್ದೇನೆ ಎಂದು. 😂
ಈಗ ನಾನು ಸುಮಾರು ಅಂದ್ರೆ ಶೇಖಡಾ 25% ಬೆಂಗಳೂರು ಓಡಾಡಿದ್ದನೆ,ಲೆಕ್ಖಗೆ ಇಲ್ಲದಷ್ಟು ಕಡೆ ತಿಂದಿದ್ದೇನೆ , ಆದರು ನನಗೆ ಬೆಂಗಳೂರು ಸ್ವಲ್ಪ ಗೊತ್ತು ಎಂದು ಹೇಳಬೋದು ಅಷ್ಟೇ.